Sunday, June 13, 2010

ಸುಧಾ ಮೂರ್ತಿಯವರ "ಮನದ ಮಾತು"

ಈಗ ಕೆಲವು ದಿನಗಳ ಹಿಂದೆ ಸುಧಾ ಮೂರ್ತಿಯವರ "ಮನದ ಮಾತು" ಎಂಬ ಪುಸ್ತಕ ಓದಿದೆ.ಸುಧಾ ಮೂರ್ತಿಯವರ ಕೆಲವಷ್ಟು  ಪುಸ್ತಕಗಳನ್ನು ಓದಿದ್ದೇನೆ . ಎಲ್ಲವೂ ಬಹಳ ಸೊಗಸಾಗಿವೆ. ಅವುಗಳನ್ನು ಓದುತ್ತ , ನಾನು ಅವರ ಅಭಿಮಾನಿಯಾಗಿದ್ದೇನೆ :)  .

ಮೊನ್ನೆ ಟಿವಿಯಲ್ಲಿ ಅವರ ಸಂದರ್ಶನ ಮೂಡಿ ಬರುತ್ತಿತ್ತು. ಅವರ ಮುಖದಲ್ಲಿ  ಎಂತಹ ಕಳೆ! ಯಾವಾಗಲೂ ಮುಖದ  ತುಂಬಾ ಮುಗುಳ್ನಗು. ಅವರಿಗೆ ಇಷ್ಥವಾದ ಹಾಡು ಯಾವುದು ಎಂದು ಕೇಳಿ ಅದನ್ನು ಹಾಡಿಸುತ್ತಿದ್ದರು. ಪ್ರತಿಯೊಂದು ಹಾಡಿಗೂ ಚಪ್ಪಾಳೆ ತಟ್ಟಿ , ಜೊತೆಯಲ್ಲಿ ತಾವೂ ಹಾಡಿ ಸಂತೋಷ ಪಡುತ್ತಿದ್ದರು. ಜೀವನದಲ್ಲಿ ಸಣ್ಣ ಸಣ್ಣ ಸಂಗತಿಗಳಲ್ಲೂ ಸಂತೋಷ ಕಾಣಬೇಕೆನ್ನುವುದನ್ನು ಇವರನ್ನು  ನೋಡಿ ಕಲಿಯಬೇಕು.

"ಮನದ ಮಾತು" ಪುಸ್ತಕದಲ್ಲಿ ಅವರ ಜೀವನದ ಕೆಲವು ಘಟನೆಗಳನ್ನು ಕುರಿತು ಬರೆದಿದ್ದಾರೆ. ಸಾಕಷ್ಟು ಸಂಗತಿಗಳು ಎಲ್ಲರಿಗೂ ಅನ್ವಯಿಸುತ್ತವೆ. ಈ ಸಣ್ಣ ಸಣ್ಣ ಕಥೆಗಳಲ್ಲಿ ಕೆಲವು ಮನತಟ್ಟುವ ಮಾತುಗಳ ತುಣುಕುಗಳು ಇಲ್ಲಿವೆ ,

  • "ಬಾಲ್ಯದಲ್ಲಿ ಯಾವುದೇ ವಿಷಯ ಚೆನ್ನಾಗಿ ಕಲಿಯದಿದ್ದರೆ , ಮನೆಯ ಬುನಾದಿಯೇ ಸರಿ ಇಲ್ಲದೆ ಕಟ್ಟಿದ ಕಟ್ಟಡದಂತೆ ಆಗುವುದು. ಮುಂದೆ ಎಂಥ ಉತ್ತಮ ಶಿಕ್ಷಕರಿದ್ದರೂ ಪ್ರಯೋಜನವಿಲ್ಲ. ಅದಕ್ಕೆ ಪಾಶ್ಚಿಮಾತ್ಯ ದೇಶದಲ್ಲಿ ಕೆಳಗಿನ ತರಗತಿಗಳಲ್ಲಿ ಉತ್ತಮ ಶಿಕ್ಷಕರಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಪರಿಶ್ರಮವನ್ನೂ ಪಡುತ್ತಾರೆ" . -- ಲೇಖನ: "ಗುರುವಿಗೆ ನಮನ"
  • "ಕುಷ್ಠ ರೋಗ ಅನುವಂಶಿಕ ರೋಗ , ಒಂದು ಬಾರಿ ಬಂದರೆ ಇದಕ್ಕೆ ಔಷದಿಯೇ ಇಲ್ಲ , ಹೀಗೆ ಹತ್ತು ಹಲವಾರು.ಆದರೆ ಇದೆಲ್ಲ ಸುಳ್ಳು.ಕುಷ್ಟ ರೋಗವೆಂದು ತಿಳಿದ ಕೂಡಲೆ ಔಷದಿಯನ್ನು ತೆಗೆದುಕೊಂಡರೆ ಖಂಡಿತವಾಗಿಯೂ ಸಂಪೂರ್ಣವಾಗಿ ಗುಣಹೊಂದಬಹುದು.ಈ ರೋಗ ಗುಣಪಡಿಸಲು ಬೇಕಾಗುವುದು ಔಷಧಿ ,ತಾಳ್ಮೆ ,ಪ್ರೀತಿ ಮತ್ತು ವಾತ್ಸಲ್ಯ " -- ಲೇಖನ: "ಒಂದು ತುಂಡು ಬಟ್ಟೆ"
  • "ಭಗವಂತನು ಕೆಲವೇ ಜನರನ್ನು ಹಣವಂತರನ್ನಾಗಿ ಮಾಡಿರುತ್ತಾನೆ. ಆದ್ದರಿಂದ ಪರರಿಗೆ ಸಹಾಯ ಮಾಡುವುದು ಅವರ ಕರ್ತವ್ಯವಾಗಿರುತ್ತದೆ." -- ಲೇಖನ: "ಒಂದು ತುಂಡು ಬಟ್ಟೆ"
  • "ಮಕ್ಕಳಿಗೆ ನಾವು ಕೊಡುವುದು ಅಪಾರವಾದ ಆಸ್ತಿಯಲ್ಲ.ಜೀವನವನ್ನು ಅರಿಯುವ ವಿವೇಚನಾ ಶಕ್ತಿ ಮತ್ತು ಆತ್ಮ ಸ್ಥೈರ್ಯ , ಬೇರುಗಳು ಮತ್ತು ರೆಕ್ಕೆಗಳಿದ್ದರೆ ಯುವಕರು ಎಲ್ಲಿ ಬೇಕಾದರೂ ಇರಬಹುದಲ್ಲವೇ?" -- ಲೇಖನ: "ಹಿರಿಯರಿಗೊಂದು ಕಿವಿಮಾತು"
  • "ದಾನವನ್ನು ಶ್ರದ್ಧೆಯಿಂದ, ಸತ್ಪಾತ್ರರಿಗೆ,ಸಂತೋಷದಿಂದ ಕೊಡು. ದಾನ ಪಡೆದವರಿಂದ ಏನನ್ನೂ ಅಪೇಕ್ಷಿಸಬೇಡ. ದಾನ ಕೊಡುವಾಗ ಕುಟುಂಬದವರ ಒಪ್ಪಿಗೆ ಪಡೆ.ಶಕ್ತಿ ಮೀರಿ ಕೊಟ್ಟು ಮನೆಯವರನ್ನು ದರಿದ್ರರನ್ನಾಗಿ ಮಾಡಬೇಡ. ಧರ್ಮ,ಜಾತಿ,ಮತ,ಲಿಂಗ ಮತ್ತು ವಯಸ್ಸಿನ ಕಟ್ಟುಪಾಡು ಹಾಕಬೇಡ". -- ಲೇಖನ: "ಕೆಂಪು ಅಕ್ಕಿಯ ಕಣಜ"

ಹೀಗೆ ಪುಸ್ತಕ ಓದುತ್ತಾ ಹೋದ ಹಾಗೆ ಅವರ ಅನುಭವಗಳಿಂದ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದಂತಹ ಸಾಕಷ್ಟು ವಿಚಾರಗಳು ಸಿಗುತ್ತವೆ. ಈ ಎಲ್ಲ ವಿಚಾರಗಳನ್ನು ಬರಿಯ ವಿಚಾರಗಳಾಗಿಯೇ ಉಳಿಸದೆ, ತಮ್ಮ ಜೀವನದಲ್ಲಿಯೂ ಪಾಲಿಸುತ್ತಿರುವ ಸುಧಾ ಮೂರ್ತಿಯವರಂತಹ ವ್ಯಕ್ತಿಗಳಿಗೆ ನನ್ನದೊಂದು ನಮನ :)

3 comments:

Unknown said...

hey rash.. kannada oodi eshto dinagalagittu.. you rekindled the kannadiga in me :) dhanyavaadagaLu :)

Rashmi sandeep said...

hehe naanu kaanada baredu eshto dina agittu . Hope to write more in future ;)

BJK Raju said...

Naanu "Manada maathu " Book na odhidene adaralli iro avara 35 anubavada kathegalu chennagive :)