ಕೆಲವು ದಿನಗಳ ಹಿಂದಷ್ಟೇ ಈ ಪುಸ್ತಕವನ್ನು ಓದಿ ಮುಗಿಸಿದೆ.ಇದರ ಕಥೆ,ನಿರೂಪಣೆ,ಪಾತ್ರಗಳು ಮನಸ್ಸಿಗೆ ಬಹಳ ಹಿಡಿಸಿತು.ಮತ್ತೊಮ್ಮೆ ಓದಬೇಕೆನಿಸಿ,ಪುನಃ ಓದುತಿದ್ದೇನೆ :) . ಹಾಗೆ ಇದರ ಬಗ್ಗೆ ಇಲ್ಲಿಯೂ ಕೂಡ ಬರೆಯಬೇಕೆನಿಸಿತು.ಇದು ಧಾರಾವಾಹಿಯಾಗಿ ಬರುತ್ತಿತು ಕೂಡ.ಆದರೆ ನಾನು ನೋಡಿಲ್ಲ.
ಈ ಕಥೆ ಶುರುವಿನಲ್ಲಿ , ಶಿವಮೊಗ್ಗದ ಹತ್ತಿರ ಒಂದು ಹಳ್ಳಿಯಲ್ಲಿ ಇರುವ ವಿಧವೆ ಗಂಗಮ್ಮ ಹಾಗು ಅವಳ ಇಬ್ಬರು ಗಂಡು ಮಕ್ಕಳ ಪರಿಚಯವಾಗುತ್ತದೆ.ಗಂಗಮ್ಮ ವಾಚಾಳಿ , ಒರಟು ಹೆಂಗಸು.ಬಾಯಿ ಬಿಟ್ಟರೆ ಕೆಟ್ಟ ಮಾತುಗಳೇ.ಮಕ್ಕಳೂ ತಾಯಿಯಂತೆ ಸ್ವಭಾವ.ಯಾರು ಹೇಗಾದರೂ ಕಷ್ಟ ಪಡಲಿ,ತಮಗೆ ಹೊಟ್ಟೆ ತುಂಬಾ ಊಟ,ಕಣ್ತುಂಬ ನಿದ್ದೆಯಾದರೆ ಆಯಿತು.ತಂದೆ ಸಾಕಷ್ಟು ಆಸ್ತಿ ಮಾಡಿಟ್ಟಿರುವುದರಿಂದ ಜೀವನಕ್ಕೆ ತೊಂದರೆ ಏನಿಲ್ಲ.
ಇಂತಹ ಕುಟುಂಬಕ್ಕೆ ಹಿರಿಯ ಸೊಸೆಯಾಗಿ ಬರುವಳು ನಂಜಮ್ಮ.ಏತಕ್ಕೂ ಪ್ರಯೋಜನವಿಲ್ಲದ ಗಂಡನ ಶ್ಯಾನುಬೋಗಿಕೆಯನ್ನು ಸಹ ತಾನೇ ನಿಭಾಯಿಸಿ ಹೇಗೋ ಸಂಸಾರ ಮಾಡುತ್ತಾಳೆ.ತನ್ನ ಗಂಡ ಅತ್ತೆ ಹಾಗು ಮೈದುನರ ದಡ್ಡತನ ಹಾಗು ಸೋಂಬೇರಿತನದಿಂದಾಗಿ ಇದ್ದ ಆಸ್ತಿಯೆಲ್ಲವು ಕಳೆದುಹೋದರೂ ಸಹ ಹೇಗೋ ಕಷ್ಟ ಹಾಗು ಬುದ್ಧಿವಂತಿಕೆಯಿಂದ ಜೀವನ ನಡೆಸುತ್ತಿರುತ್ತಾಳೆ. ಹೀಗೆ ಈ ಕಥೆಯಲ್ಲಿ ,ಒಂದು ಹಳ್ಳಿಯಲ್ಲಿ ದಿನದಿನದ ಊಟಕ್ಕೂ ಸಹ ಪಡಬೇಕಾದ ಕಷ್ಟ , ಗಂಡ ಹೇಗೆ ಇದ್ದರು ಹೊಂದಿಕೊಳ್ಳಲೇಬೇಕಾದ ಪರಿಸ್ತಿತಿ , ಮಕ್ಕಳನ್ನು ಓಧಿಸಲು ಪಡಬೇಕಾದ ಪಾಡು, ಮನಸನ್ನು ತಟ್ಟುವಂತೆ ಮೂಡಿಬರುತ್ತವೆ.
ಈ ಎಲ್ಲ ಕಷ್ಟಗಳ ಮಧ್ಯೆ , ನಂಜಮ್ಮನ ಮಕ್ಕಳಿಗೆ ಪ್ಲೇಗು ರೋಗ ತಗುಲಿ ಮೂರರಲ್ಲಿ ಎರಡು ಮಕ್ಕಳನ್ನು ಕಳೆದುಕೊಳ್ಳುತ್ತಾಳೆ.ನಂತರ ತಾನೇ ಈ ರೋಗಕ್ಕೆ ಬಲಿಯಾಗುತ್ತಾಳೆ.ಇದಿಷ್ಟು ಕಥೆಯ ಬಹಳ ಚಿಕ್ಕ ಸಾರಾಂಶ.ಇದರಲ್ಲಿ ಬರುವ ಎಲ್ಲ ಪಾತ್ರಗಳು ಬಹಳ ನೈಜವಾಗಿವೆ.ಕಥೆಯ ಯಾವುದೇ ವಿವರಣೆ ಬರಿಯ ಕಥೆ ಅನಿಸದೆ , ಯಾವುದೇ ಹಳ್ಳಿಯಲ್ಲಿ ನಡೆಯಬಹುದಾದ ಘಟನೆಗಳೇ ಆಗಿವೆ.
ಹೀಗೆ ಓದುತ್ತಿರಬೇಕಾದರೆ ಮನಸಿನಲ್ಲಿ ಒಂದು ವಿಚಾರ ಬಂದಿತು.ಒಂದು ವೇಳೆ ನಾನು ನಂಜಮ್ಮನ ಜಾಗದಲ್ಲಿ ಇದ್ದಿದರೆ ಏನು ಮಾಡುತ್ತಿದೆ ಎಂದು.ತಕ್ಷಣ ಅನಿಸಿದ್ದು "ಇಂತಹ ಕೆಟ್ಟ ಗಂಡನ ಜೊತೆ ಕಂಡಿತ ನಾನು ಇರುತ್ತಿರಲಿಲ್ಲ. ಅವನನ್ನು ಬಿಟ್ಟು ನನ್ನ ಜೀವನ ನಾನು ಮಾಡುತ್ತಿದ್ದೆ".ಆದರೆ ನನಗೆ ಇದು ಸುಲಭವೆನಿಸಬಹುದು.ಆದರೆ ಆರ್ಥಿಕವಾಗಿ ಸ್ವಾವಲಂಭಿಯಿಲ್ಲದಿದ್ದರೆ ಈ ನಿಟ್ಟಿನಲ್ಲಿ ಯೋಚಿಸುವುದೂ ಕಷ್ಟವೇ.ಅದಕ್ಕೆ ಅಲ್ಲವೇ ಸ್ತ್ರೀ ಶಿಕ್ಷಣ ಅಷ್ಟೊಂದು ಮಹತ್ವ ಪಡೆಯುವುದು.
ಈ ಕಥೆಯ ಕೊನೆಯ ದೃಶ್ಯ ಮನತಟ್ಟುವಂತಿದೆ.ನಂಜಮ್ಮನ ಕೊನೆಯ ಮಗನನ್ನು ಯಾರೂ ಜವಾಬ್ದಾರಿಯಿಂದ ಸಾಕುವವರು ಇಲ್ಲದೆ, ಊರಿನ ದಾಸಯ್ಯನವರು ತಮ್ಮೊಡನೆ ಕರೆದೊಯ್ಯುತಾರೆ .ದಾರಿಯಲ್ಲಿ ತಾಂಬೂಲ ಅಗಿಯುತ್ತ ಮರದಡಿ ಮಲಗಿದ್ದ ನಂಜಮ್ಮನ ಗಂಡ, ತನ್ನ ಮಗನನ್ನು ಯಾರೋ ಕರೆದುಕೊಂಡು ಹೋಗುತ್ತಿರುವುದನ್ನು ಕಂಡೂ ಸಹ,ಬಾಯಲ್ಲಿರುವ ತಾಂಬೂಲವನ್ನು ಉಗಿದರೆ ಸುಮ್ಮನೆ ದಂಡ ಅನಿಸಿ ಸುಮ್ಮನೆ ಮಲಗುವನು.ಇದು ನಂಜಮ್ಮ ತನ್ನ ಜೀವನವಿಡಿ ಪಟ್ಟ ಪಾಡಿಗೆ ಕನ್ನಡಿ ಹಿಡಿಯುವಂತ ದೃಶ್ಯವಾಗಿದೆ.
6 comments:
Interesting review. I should read the book some time :)
i never read any of S.L Bayrappa's book but heard from some of the ppl tht his books are best.. This is one of them :) ... Rash, u got a really good one for ur narration which has come good ..:) .. (note:couldn't find a way to type in kannada)
Review ಚೆನ್ನಾಗಿದೆ . ಗೃಹಭಂಗ ಕಾದಂಬರಿ ಚೆನ್ನಾಗಿದೆ , ಬಹಳ ದಿನ ಗಳ ಹಿಂದೆ Serial ಬರ್ತಿತ್ತು . ಎಸ್. ಲ್. ಬೈರಪ್ಪ ನವರ ಎಲ್ಲ ಕಾದಂಬರಿಗಳು ಚೆನ್ನಾಗಿದೆ ""ತಬ್ಬಲಿ ನೀನಾದೆ ಮಗನೆ" " ಆವರಣ" "ವಂಶವೃಕ್ಷ "etc. ಅವರ ಕಾದಂಬರಿಯಲ್ಲಿ Reality ಇರುತ್ತೆ
ha ha olle kelasa, mom was telling me to read this and learn something from the character. she is gr8 fan of s.l.bayrappa. let me also read and get some inspiration
ಪುಸ್ತಕ ವಿಮರ್ಶೆ ಚೆನ್ನಾಗಿ ಬರೀತಿಯ ರಶ್. ಹೌದು ಎಸ್.ಎಲ್.ಬಿ ಅವರ ಪುಸ್ತಕ ಓದುಗನಿಗೆ ಹಲವಾರು ಯೋಚನಾ ಲಹರಿಯನ್ನು ಕೊಡುತ್ತೆ.
ಸ್ತ್ರೀ ಶಿಕ್ಷಣದ ಜೊತೆಗೆ ಸ್ವಾವಲಂಬನೆ ಇನ್ನೂ ಮುಖ್ಯ ಇತ್ತೀಚಿನ ದಿನಗಳಲ್ಲಿ.
Nice Write up :)
Cheers,
Sadh :)
Thanks all :)
@Teju : I didn't know that atte has reading habit :) Sure go ahead and read :)
Post a Comment